ಕಾರ್ ಪ್ರಿಯರಿಗೆ ಶಾಕ್ ಕೊಟ್ಟ ಕಂಪನಿ, ಹಬ್ಬದ ಸೀಸನ್ ನಲ್ಲಿ ಈ ಪ್ರಮುಖ ಕಾರುಗಳ ಬೆಲೆ ಹೆಚ್ಚಿಸಲು ನಿರ್ಧಾರ

ನೀವು ಸಹ ಹಬ್ಬದ ಸಮಯದಲ್ಲಿ ಕಾರು ಖರೀದಿಸಲು ಹೊರಟಿದ್ದರೆ, ಕಂಪನಿಯ ಕಾರಿನ ಬೆಲೆ ಎಷ್ಟು ಎಂದು ತಿಳಿದುಕೊಳ್ಳಿ

ಹಬ್ಬ ಹರಿದಿನಗಳಲ್ಲಿ ಎಲ್ಲರೂ ದೊಡ್ಡ ವಸ್ತುಗಳನ್ನು ಖರೀದಿಸುತ್ತಾರೆ. ಅಲ್ಲದೆ, ಹಬ್ಬ ಹರಿದಿನಗಳಲ್ಲಿ ಕಾರು ಖರೀದಿಸುವ ಕನಸು ಅನೇಕರಿಗೆ ಇರುತ್ತದೆ. ಈ ಹಬ್ಬದ ಅವಧಿಯಲ್ಲಿ ಕಾರು ಕಂಪನಿಗಳು (Car companies) ಗ್ರಾಹಕರಿಗೆ ಹಲವು ಕೊಡುಗೆಗಳನ್ನು ನೀಡುತ್ತಿವೆ. ನೀವು ಸಹ ಹಬ್ಬದ ಸಮಯದಲ್ಲಿ ಕಾರು ಖರೀದಿಸಲು ಹೊರಟಿದ್ದರೆ, ಕಂಪನಿಯ ಕಾರಿನ ಬೆಲೆ ಎಷ್ಟು ಎಂದು ತಿಳಿದುಕೊಳ್ಳಿ.

ಹಬ್ಬದ ಸೀಸನ್‌ನಲ್ಲಿ ಹೊಸ ಕಾರು ಖರೀದಿಸಲು ನೀವು ಯೋಜಿಸುತ್ತಿದ್ದರೆ, ಈ ಬಾರಿ ಕಾರು ಖರೀದಿಸಲು ನೀವು ಹೆಚ್ಚಿನ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಯಾವ ಕಂಪನಿ ಯಾವ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ ಎಂಬುವುದನ್ನು ನೋಡಿ.

KIA

ಕಂಪನಿಯು ಅಕ್ಟೋಬರ್ 1 ರಿಂದ ಸೆಲ್ಟೋಸ್ ಮತ್ತು ಕ್ಯಾರೆನ್ಸ್ ಬೆಲೆಗಳನ್ನು ಸುಮಾರು ಎರಡು ಪ್ರತಿಶತದಷ್ಟು ಹೆಚ್ಚಿಸಲಿದೆ. ಕಿಯಾ (Kia) ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆ ಮುಖ್ಯಸ್ಥ ಹರ್ದೀಪ್ ಎಸ್ ಬ್ರಾರ್ ಅವರು ಪಿಟಿಐ (PTI) ಜೊತೆ ಮಾತನಾಡುತ್ತಾ ಈ ಮಾಹಿತಿ ನೀಡಿದ್ದಾರೆ. ಕಿಯಾ ಸೆಲ್ಟೋಸ್ 10.90 ಲಕ್ಷದಿಂದ 20 ಲಕ್ಷಕ್ಕೆ ಮಾರಾಟವಾಗುತ್ತಿದೆ. ಈ ಕಾರನ್ನು 22 ವೆರಿಯಂಟ್‌ಗಳಲ್ಲಿ ಖರೀದಿಸಬಹುದು. ಸ್ಥಳೀಯ ಮಾರುಕಟ್ಟೆಯಲ್ಲಿ ಕಿಯಾ ಕ್ಯಾರೆನ್ಸ್ ಆರಂಭಿಕ ಬೆಲೆ 10.45 ಲಕ್ಷ ರೂ. ಮತ್ತು ಟಾಪ್ ಮಾಡೆಲ್ ಎಕ್ಸ್ ಶೋ ರೂಂ ಬೆಲೆ 18.95 ಲಕ್ಷ ರೂ ಆಗಲಿದೆ ಎಂದು ಹೇಳಿದ್ದಾರೆ.

ಕಾರ್ ಪ್ರಿಯರಿಗೆ ಶಾಕ್ ಕೊಟ್ಟ ಕಂಪನಿ, ಹಬ್ಬದ ಸೀಸನ್ ನಲ್ಲಿ ಈ ಪ್ರಮುಖ ಕಾರುಗಳ ಬೆಲೆ ಹೆಚ್ಚಿಸಲು ನಿರ್ಧಾರ - Kannada News

ಮಹೀಂದ್ರ ಸ್ಕಾರ್ಪಿಯೋ N SUV

ಕಂಪನಿಯು ಇತ್ತೀಚೆಗೆ ಮಹೀಂದ್ರಾ ಸ್ಕಾರ್ಪಿಯೊ ಎನ್ (Mahindra Scorpio n) ಬೆಲೆ ಏರಿಕೆಯನ್ನು ಘೋಷಿಸಿತ್ತು. ಇದೀಗ ಕಂಪನಿಯು ಮಹೀಂದ್ರಾ XUV300 ಬೆಲೆಯನ್ನು ಕೂಡ ಹೆಚ್ಚಿಸಿದೆ. ಈ ಭವ್ಯವಾದ SUV ಬೆಲೆ 68,501 ರೂ.ಗಳಷ್ಟು ಹೆಚ್ಚಾಗಿದೆ. ಕಳೆದ ಎರಡು ತಿಂಗಳಲ್ಲಿ ಇದು ಎರಡನೇ ಬಾರಿಗೆ ಮಹೀಂದ್ರಾ 5-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ (Safety rating) ಎಸ್‌ಯುವಿ ಬೆಲೆಯನ್ನು ಹೆಚ್ಚಿಸಿದೆ.

 

Comments are closed.