ನೋಡಿದ ಜನ ಅಂತಾರೆ ! ಇದ್ರೆ ಇಂತ ಬೈಕ್ ಇರಬೇಕು ನಮ್ಮ ಬಜೆಟ್ ಗೆ ಅಂತ

BS6 ಕಂಪ್ಲೈಂಟ್ ಎಂಜಿನ್‌ನೊಂದಿಗೆ ಬರುವ ಭಾರತದಲ್ಲಿನ ಟಾಪ್ ಕಡಿಮೆ ಬೆಲೆಯ ಬೈಕ್‌ಗಳು

ಹೊಸ ಬೈಕ್  ಖರೀದಿ ಮಾಡುವ  ಪ್ಲಾನ್ ಇದ್ಯಾ ಹಾಗಾದರೆ ನೀವು ನಿಮ್ಮ ಬಜೆಟ್ ನಲ್ಲಿ ಬೈಕ್ ನೋಡುತ್ತಿದ್ದೀರಾ  , ಹಾಗಾದರೆ ನಿಮ್ಮ ಬಜೆಟ್ ಗೆ ನೀವು ಯಾವ ರೀತಿಯ ಉತ್ತಮವಾದ ಬೈಕ್ ಗಳನ್ನು  ಖರೀದಿಸಬಹುದು ಎಂಬುದನ್ನು ನೋಡಿ .ಈ ಕಡಿಮೆ ಬೆಲೆ ಬೈಕ್‌ಗಳ ವೈಶಿಷ್ಟ್ಯತೆಗಳನ್ನು ತಿಳಿದುಕೊಳ್ಳಿ .

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಬೈಕ್‌ಗಳ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ.  5-ವರ್ಷದ ವಿಮೆ, ಕಡ್ಡಾಯ ABS/CBS ಮತ್ತು BS6 ಎಮಿಷನ್ ಮಾನದಂಡಗಳಂತಹ ನಿಯಮಗಳು ಈ ಬೆಲೆ ಏರಿಕೆಯ ಹಿಂದಿನ ಕೆಲವು ಪ್ರಮುಖ ಕಾರಣಗಳಾಗಿವೆ.

ಇದು ಎಲ್ಲಾ ಬ್ರಾಂಡ್ ಎಂಟ್ರಿ ಲೆವೆಲ್  ಬೈಕ್‌ಗಳ(Bike) ಬೆಲೆಗಳ ಮೇಲೆ ಪರಿಣಾಮ ಬೀರಿದೆ. ನಾವು ಭಾರತದಲ್ಲಿ ಕೆಲವೇ ಕೈಗೆಟುಕುವ ಮತ್ತು ಬಜೆಟ್(Budget) ಸ್ನೇಹಿ ಬೈಕ್‌ಗಳನ್ನು ಮಾತ್ರ ಹೊಂದಿದ್ದೇವೆ. BS6 ಕಂಪ್ಲೈಂಟ್ ಎಂಜಿನ್‌ನೊಂದಿಗೆ ಬರುವ ಭಾರತದಲ್ಲಿನ ಟಾಪ್ ಕಡಿಮೆ ಬೆಲೆಯ ಬೈಕ್‌ಗಳು ಇಲ್ಲಿವೆ.

ನೋಡಿದ ಜನ ಅಂತಾರೆ ! ಇದ್ರೆ ಇಂತ ಬೈಕ್ ಇರಬೇಕು ನಮ್ಮ ಬಜೆಟ್ ಗೆ ಅಂತ - Kannada News

ಹೀರೋ HF100

ಹೊಸದಾಗಿ ಬಿಡುಗಡೆ ಮಾಡಿರುವ Hero HF 100cc ಕೆಪ್ಯಾಸಿಟಿ  ಹೊಂದಿದೆ . Hero HF 100 ಪ್ರಸ್ತುತ ಭಾರತದಲ್ಲಿ 100cc ವಿಭಾಗದಲ್ಲಿ ಅಗ್ಗದ ಬೆಲೆಯ ಬೈಕ್ ಆಗಿದೆ. ಮೈಲೇಜ್ 70-75 ಕಿಮೀ/ಲೀಟರ್ ಗೆ ನೀಡಲಿದೆ . ಇದು BS6 ಕಂಪ್ಲೈಂಟ್ ಎಂಜಿನ್‌ನೊಂದಿಗೆ ಬರುತ್ತದೆ ಮತ್ತು ಭಾರತದಲ್ಲಿ ಹೀರೋ HF 100 ಬೆಲೆ 49,400 ರೂ (ಎಕ್ಸ್ ಶೋ ರೂಂ ಬೆಲೆ).

ನೋಡಿದ ಜನ ಅಂತಾರೆ ! ಇದ್ರೆ ಇಂತ ಬೈಕ್ ಇರಬೇಕು ನಮ್ಮ ಬಜೆಟ್ ಗೆ ಅಂತ - Kannada News

Hero HF 100 ಸಿಂಗಲ್-ಸಿಲಿಂಡರ್, BS6 ಕಂಪ್ಲೈಂಟ್ ಎಂಜಿನ್‌ನೊಂದಿಗೆ ಬರುತ್ತದೆ.ಇದು 8.36 PS ಗರಿಷ್ಠ ಕೆಪ್ಯಾಸಿಟಿ ಮತ್ತು ಎಲೆಕ್ಟ್ರಾನಿಕ್ ಫ್ಯುಯೆಲ್  -ಇಂಜೆಕ್ಷನ್ ಸಿಸ್ಟಮ್‌ನೊಂದಿಗೆ ಬರುತ್ತದೆ ಮತ್ತು  4-ಸ್ಪೀಡ್ ಗೇರ್‌ಬಾಕ್ಸ್‌ಗೆ ಹೊಂದಿದೆ . ಈ ಬೈಕ್‌ನ ಫ್ರಂಟ್ ನಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಬ್ಯಾಕ್ ನಲ್ಲಿ  ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ಅಳವಡಿಸಲಾಗಿದೆ.

ಬಜಾಜ್ CT 100

ಬಜಾಜ್ CT 100 ಮೂರು ಬಣ್ಣಗಳಲ್ಲಿ ದೊರೆಯುತ್ತದೆ . CT 100 ಪ್ರಸ್ತುತ ಬಜಾಜ್(Bajaj ) ಶ್ರೇಣಿಯಿಂದ ಭಾರತದಲ್ಲಿ ಅಗ್ಗದ ಬೈಕ್ ಆಗಿದೆ. ಭಾರತದಲ್ಲಿ ಬಜಾಜ್ CT 100 ಬೆಲೆ ರೂ 51,750 (ಎಕ್ಸ್ ಶೋ ರೂಂ ಬೆಲೆ).

ನೋಡಿದ ಜನ ಅಂತಾರೆ ! ಇದ್ರೆ ಇಂತ ಬೈಕ್ ಇರಬೇಕು ನಮ್ಮ ಬಜೆಟ್ ಗೆ ಅಂತ - Kannada News

ಬಜಾಜ್ CT 100 102 cc ಸಿಂಗಲ್-ಸಿಲಿಂಡರ್ ಎಂಜಿನ್‌ನೊಂದಿಗೆ ಬರುತ್ತದೆ, 4-ಸ್ಪೀಡ್ ಗೇರ್‌ಬಾಕ್ಸ್‌ಗೆ ಹೊಂದಿಸಲಾಗಿದೆ. ಇದರ ಎಂಜಿನ್ ಫ್ಯುಯೆಲ್  ಇಂಜೆಕ್ಟ್ ಆಗಿದೆ. ಇದರ ಎರಡೂ ವೀಲ್ ನಲ್ಲಿ ಡ್ರಮ್ ಬ್ರೇಕ್ ಬರುತ್ತದೆ, ಮತ್ತು ಇದು ಸಿಬಿಎಸ್ ಅನ್ನು ಸಹ ಪಡೆಯುತ್ತದೆ. CT100 ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು SNS ಬ್ಯಾಕ್ ಸಸ್ಪೆನ್ಷನ್ ಅನ್ನು ಅಳವಡಿಸಲಾಗಿದೆ.ಇದರ ಮೈಲೇಜ್ 75 ಕಿಮೀ/ಪ್ರತಿ ಲೀಟರ್ ಗೆ

ಟಿವಿಎಸ್ ಸ್ಪೋರ್ಟ್

TVS ಸ್ಪೋರ್ಟ್ ಟ್ರಾವೆಲ್ ಬೈಕ್ ಆಗಿದ್ದು, ಕಿಕ್ ಸ್ಟಾರ್ಟ್ ಮತ್ತು ಸೆಲ್ಫ್ ಸ್ಟಾರ್ಟ್ ಆಪ್ಷನ್  ನೀಡಲಾಗಿದೆ. ಇದು 7 ಕಲರ್ ನ  ಆಯ್ಕೆಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಟಿವಿಎಸ್ ಸ್ಪೋರ್ಟ್‌ನ ಕಿಕ್ ಸ್ಟಾರ್ಟ್ ಮಾಡೆಲ್ ರೂ 56,130 (ಎಕ್ಸ್-ಶೋ ರೂಂ ಬೆಲೆ) ಆಗಿದ್ದು, ಸೆಲ್ಫ್-ಸ್ಟಾರ್ಟ್  ಮಾಡೆಲ್ ರೂ 62,980 (ಎಕ್ಸ್-ಶೋ ರೂಂ) ಆಗಿದೆ.

ನೋಡಿದ ಜನ ಅಂತಾರೆ ! ಇದ್ರೆ ಇಂತ ಬೈಕ್ ಇರಬೇಕು ನಮ್ಮ ಬಜೆಟ್ ಗೆ ಅಂತ - Kannada News

TVS ಸ್ಪೋರ್ಟ್ 109.7 cc ಸಿಂಗಲ್-ಸಿಲಿಂಡರ್ ಎಂಜಿನ್ ಜೊತೆಗೆ BS6 ಒಳಗೊಂಡಿದೆ . ಇಕೋ ಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಹೊಂದಿದೆ ಇದು ಮೈಲೇಜ್ ಅನ್ನು ಶೇಕಡಾ 15 ರಷ್ಟು ಸುಧಾರಿಸುತ್ತದೆ. ಟಿವಿಎಸ್ ಸ್ಪೋರ್ಟ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು 5-ಸ್ಟೆಪ್ಸ್ ಹೊಂದಾಣಿಕೆಯ ಹೈಡ್ರಾಲಿಕ್ ರಿಯರ್ ಶಾಕ್ ಅಬ್ಸಾರ್ಬರ್ ಹೊಂದಿದೆ .ಇದರ ಮೈಲೇಜ್ 75 ಕಿಮೀ/ಪ್ರತಿ ಲೀಟರ್ ಗೆ.

ಹೀರೋ ಸ್ಪ್ಲೆಂಡರ್ ಪ್ಲಸ್

ಹೊಸ ಸ್ಪ್ಲೆಂಡರ್ BS6 ಎಂಜಿನ್‌ನೊಂದಿಗೆ ಬರುತ್ತದೆ ಮತ್ತು ಇದನ್ನು ಆಯ್ಕೆ ಮಾಡಲು ನಾಲ್ಕು ಮಾಡೆಲ್ ನೀಡಲಾಗುತ್ತದೆ. ಸ್ಪ್ಲೆಂಡರ್ ವಿಶ್ವಾಸಾರ್ಹ ಮತ್ತು ದೇಶದಲ್ಲಿ ಹೆಚ್ಚು ಮಾರಾಟವಾಗುವ ಪ್ರಯಾಣಿಕರ ಬೈಕ್ ಆಗಿದೆ.ಬೈಕ್ಗಳಲ್ಲಿಇದು ಲೆಜೆಂಡ್ರಿ ಸ್ಥಾನ ಪಡೆದಿದೆ  ಹೀರೋ ಸ್ಪ್ಲೆಂಡರ್  (Hero Splendour)  ಬೆಲೆ ರೂ 62,535 ರಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ ಬೆಲೆ).

ನೋಡಿದ ಜನ ಅಂತಾರೆ ! ಇದ್ರೆ ಇಂತ ಬೈಕ್ ಇರಬೇಕು ನಮ್ಮ ಬಜೆಟ್ ಗೆ ಅಂತ - Kannada News

ಹೀರೋ ಸ್ಪ್ಲೆಂಡರ್ ಪ್ಲಸ್ 97.2 ಸಿಸಿ ಸಿಂಗಲ್ ಸಿಲಿಂಡರ್, 4-ಸ್ಟ್ರೋಕ್, ಏರ್ ಕೂಲ್ಡ್ ಎಂಜಿನ್‌ ಹೊಂದಿದೆ. ಇದು ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ ಬರುತ್ತದೆ.4-ಸ್ಪೀಡ್ ಗೇರ್‌ಬಾಕ್ಸ್‌ಗೆ  8.02 PS ಗರಿಷ್ಠ ಪವರ್ ಮತ್ತು 8.05 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. i3S ತಂತ್ರಜ್ಞಾನವು ಇಂಧನ ಬಳಕೆಯನ್ನು ಸುಮಾರು 9% ರಷ್ಟು ಉಳಿಸಲು ಸಹಾಯ ಮಾಡುತ್ತದೆ.ಮೈಲೇಜ್ 80 ಕಿಮೀ/ ಪ್ರತಿ ಲೀಟರ್ ಗೆ ನೀಡಲಿದೆ .

ಟಿವಿಎಸ್ ರೇಡಿಯನ್

ಟಿವಿಎಸ್‌ನ ಮತ್ತೊಂದು ಬೈಕ್ ಟಿವಿಎಸ್ ರೇಡಿಯನ್ ಆಗಿದೆ. TVS Radeon ಮೂರು ಮಾಡೆಲ್ ನಲ್ಲಿ ನೀಡಲಾಗುತ್ತದೆ. ಮತ್ತು ಆಯ್ಕೆ ಮಾಡಲು 7 ಕಲರ್  ನೀಡಲಾಗುತ್ತದೆ. ಇದು ವರ್ಷದ ಪ್ರಯಾಣಿಕ ಬೈಕ್ (Bike) ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಭಾರತದಲ್ಲಿ TVS Radeon ಬೆಲೆಯು 59,992 ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಟಾಪ್-ಎಂಡ್ ಮಾಡೆಲ್  68,576 ರೂ

ನೋಡಿದ ಜನ ಅಂತಾರೆ ! ಇದ್ರೆ ಇಂತ ಬೈಕ್ ಇರಬೇಕು ನಮ್ಮ ಬಜೆಟ್ ಗೆ ಅಂತ - Kannada News

ಟಿವಿಎಸ್ ರೇಡಿಯನ್ 109.7 ಸಿಸಿ ಸಿಂಗಲ್-ಸಿಲಿಂಡರ್, 4-ಸ್ಟ್ರೋಕ್ ಎಂಜಿನ್‌ನೊಂದಿಗೆ ಬರುತ್ತದೆ, 4-ಸ್ಪೀಡ್ ಗೇರ್‌ಬಾಕ್ಸ್‌ ಹೊಂದಿದೆ . ಇದು ಇಕೋ ಟ್ರಸ್ಟ್ ಫ್ಯೂಲ್-ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ ದೀರ್ಘಾವಧಿಯ ಡ್ಯೂರಾ-ಲೈಫ್ ಎಂಜಿನ್‌ನೊಂದಿಗೆ ಬರುತ್ತದೆ. ಮತ್ತು  7,350 rpm ನಲ್ಲಿ 8.19 PS ಗರಿಷ್ಠ ಪವರ್ 4,500 rpm ನಲ್ಲಿ 8.7 Nm ಗರಿಷ್ಠ ಟಾರ್ಕ್ ಅನ್ನು ಮಾಡುತ್ತದೆ.

ಟಿವಿಎಸ್(TVS ) ಕಮ್ಯೂಟರ್ ಟ್ಯೂಬ್‌ಲೆಸ್ ಟೈರ್‌ಗಳು, ಅಲಾಯ್ ವೀಲ್‌ಗಳು ಹೊಂದಿವೆ. ಮಾಡೆಲ್ SBT ಜೊತೆಗೆ ಡ್ರಮ್ ಬ್ರೇಕ್ಗಳೊಂದಿಗೆ ಬರುತ್ತವೆ. ಇದು ಐಚ್ಛಿಕ ಫ್ರಂಟ್ ಡಿಸ್ಕ್ ಬ್ರೇಕ್‌ನೊಂದಿಗೆ ಬರುವ ಭಾರತದ ಅಗ್ಗದ ಬೈಕ್‌ಗಳಲ್ಲಿ ಒಂದಾಗಿದೆ.ಇದರ ಮೈಲೇಜ್ ಪ್ರತಿ ಲೀಟರ್ ಗೆ 73km ನೀಡಲಿದೆ .

ಬಜಾಜ್ ಪ್ಲಾಟಿನಾ 100
ಪ್ಲಾಟಿನಾ 100 ಬಜಾಜ್‌ನ ಮತ್ತೊಂದು ಬೈಕ್ ಆಗಿದ್ದು, ಇದು ಭಾರತದಲ್ಲಿನ ಟಾಪ್ 10 ಅಗ್ಗದ ಬೈಕ್‌ಗಳ ಹೋಲಿಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಬಜಾಜ್ ಪ್ಲಾಟಿನಾ 100 BS6 ಮಾಡೆಲ್ ಆಗಿದೆ ಮತ್ತು ಇದು ಆಯ್ಕೆ ಮಾಡಲು ಎರಡು ಪೇಂಟ್ ಸ್ಕೀಮ್‌ಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಪ್ಲಾಟಿನಾ 100 ಬೆಲೆ ರೂ 55,379 (ಎಕ್ಸ್ ಶೋ ರೂಂ ಬೆಲೆ) ಮತ್ತು ಇದು ಭಾರತದಲ್ಲಿ 60000 ಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಬೈಕುಗಳಲ್ಲಿ ಒಂದಾಗಿದೆ.

ನೋಡಿದ ಜನ ಅಂತಾರೆ ! ಇದ್ರೆ ಇಂತ ಬೈಕ್ ಇರಬೇಕು ನಮ್ಮ ಬಜೆಟ್ ಗೆ ಅಂತ - Kannada News

ಬಜಾಜ್ ಪ್ಲಾಟಿನಾ 100 102 cc ಸಿಂಗಲ್-ಸಿಲಿಂಡರ್ DTS-i ಎಂಜಿನ್‌ . ಇದು ಎಲೆಕ್ಟ್ರಾನಿಕ್ ಫ್ಯುಯೆಲ್ -ಇಂಜೆಕ್ಷನ್ ವ್ಯವಸ್ಥೆಯನ್ನು ಬಳಸುತ್ತದೆ ಮತ್ತು ಇದು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಪ್ಲಾಟಿನಾ 100 7.9 PS ಗರಿಷ್ಠ ಪವರ್  ಮತ್ತು 8.3 Nm . ಇದು ಆಂಟಿ-ಸ್ಕಿಡ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಎರಡೂ ಟೈಯರ್ ಡ್ರಮ್ ಬ್ರೇಕ್‌ಗಳನ್ನು ಪಡೆಯುತ್ತದೆ. ಇದರ ಸಸ್ಪೆನ್ಷನ್ ಸೆಟಪ್ ಲಾಂಗ್ ಡ್ರೈವ್ ಪ್ರಯಾಣವನ್ನು ನೀಡುತ್ತದೆ.ಇದರ ಮೈಲೇಜ್ 75 km ಪ್ರತಿ ಲೀಟರ್ ಗೆ .

 

 

Leave A Reply

Your email address will not be published.